ಪಕ್ಷದ ಹಿನ್ನೆಲೆ
ರಾಜ್ಯದ ಮತ್ತು ದೇಶದ ರಾಜಕೀಯದಲ್ಲಿ ಮೌಲ್ಯಗಳನ್ನು ಆಗ್ರಹಿಸಿ, ರಾಜಕಾರಣವನ್ನು ಸ್ವಚ್ಚ, ಪ್ರಾಮಾಣಿಕ ರೀತಿಯಲ್ಲಿ ನಡೆಸಬೇಕು ಎಂದು ಸ್ವತ: 2008 ರಿಂದ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೋರಾಟ ಮಾಡುತ್ತಿರುವ ರವಿ ಕೃಷ್ಣಾರೆಡ್ಡಿಯವರು ಸಮಾನ ಮನಸ್ಕರೊಡಗೂಡಿ ಸ್ಥಾಪಿಸಿರುವ ಪಕ್ಷವೇ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ.
2016 ರಲ್ಲಿ ರವಿ ಕೃಷ್ಣಾರೆಡ್ದಿಯವರ ನೇತೃತ್ವದಲ್ಲಿ ಸ್ಠಾಪನೆಯಾದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮೂಲಕ ರಾಜ್ಯದ ನೂರಾರು ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ “ಲಂಚಮುಕ್ತ ಅಭಿಯಾನ” ಎನ್ನುವ ಸೋಷಿಯಲ್ ಆಡಿಟ್ ನ್ನು ನಡೆಸುತ್ತಾ, ಹಲವಾರು ಸರ್ಕಾರಿ ಅಧಿಕಾರಿ ಹಾಗೂ ಪೊಲೀಸರ ಭ್ರಷ್ಟಾಚಾರವನ್ನು ಸ್ಟಿಂಗ್ ಆಪರೇಶನ್ ಮೂಲಕ ಬಯಲಿಗೆ ಎಳೆದು ಅವರು ಅಮಾನತು ಆಗುವ ಹಾಗೆ ಮಾಡುತ್ತಾ, ಸಾವಿರಾರು ಅಮಾಯಕ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ನ್ಯಾಯ ಕೊಡಿಸುತ್ತಾ ಬಂದಿರುವ ಈ ವೇದಿಕೆಯ ಹಲವಾರು ಪದಾಧಿಕಾರಿಗಳು ಸೇರಿ ನಿರ್ಮಿಸಿರುವ ಪಕ್ಷವೇ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷ.