ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ

ದೇಣಿಗೆ

ನಾವು ನಿಮ್ಮನ್ನು ಪ್ರಜಾಪ್ರಭುತ್ವದಲ್ಲಿ ಹಾಗೂ ಜನಪರ ರಾಜಕಾರಣದಲ್ಲಿ ಪಾಲುದಾರರಾಗುವಂತೆ ಆಗ್ರಹಿಸುತ್ತಿದ್ದೇವೆ, ಬೇಡುತ್ತಿದ್ದೇವೆ. ಎಲ್ಲಿಯ ತನಕ ರಾಜಕೀಯ ಪಕ್ಷಗಳಿಗೆ ಜನ ದೇಣಿಗೆ ನೀಡಿ ಬೆಂಬಲಿಸುವುದಿಲ್ಲವೋ, ಅಲ್ಲಿಯ ತನಕ ಅವು ಖಾಸಗಿ ಆಸ್ತಿ ಆಗಿರುತ್ತವೆ. ಹಾಗಾಗಿ ನಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವ, ನಮ್ಮ ಪರವಾಗಿ ಕೆಲಸ ಮಾಡುವ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ನಾವು ಬೆಂಬಲಿಸಬೇಕು.

ರಾಜಕಾರಣಿಗಳ, ರಾಜಕೀಯ ಪಕ್ಷಗಳ ಗುಲಾಮರಾಗಬೇಡಿ; ಅವರ ಹಾಗೂ ಅವುಗಳ ಮಾಲೀಕರಾಗಿ.

ದಯವಿಟ್ಟು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ದೇಣಿಗೆ ನೀಡಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣವನ್ನು ಬೆಂಬಲಿಸಿ.

ನಿಮ್ಮ ಮೊಬೈಲ್ ಸಂಖ್ಯೆಯನ್ನು ನಾವು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.

“ಒಂದು ವೋಟು ಒಂದು ನೋಟು” ಅಭಿಯಾನ

ಪ್ರಜಾಪ್ರಭುತ್ವದಲ್ಲಿ ಜನರ ಸಹಭಾಗಿತ್ವ ಮತ್ತು ಮಾಲೀಕತ್ವ ಅತ್ಯಂತ ಮುಖ್ಯವಾದುದು. ಇದನ್ನು ಸಾಧಿಸಲು ಬೇಕಾದ ವಿಧಾನಗಳನ್ನು ಮತ್ತು ಪ್ರಕ್ರಿಯೆಗಳನ್ನು ಮತದಾರರು ಅಳವಡಿಸಿಕೊಳ್ಳಬೇಕು. ಇದರ ಭಾಗವೇ ಈ “ಒಂದು ವೋಟು ಒಂದು ನೋಟು” ಅಭಿಯಾನ.

Donate