ಆಗ್ನೇಯ ಪದವೀಧರರ ಕ್ಷೇತ್ರ – South East Graduates Constituency

ಶ್ರೀನಿವಾಸ್ ಟಿ. (ಪಿಜಿಡಿಎಂ – ಪ್ಲಾಸ್ತಿಕ್ ತಂತ್ರಜ್ನಾನ)
Srinivas T. (PGDM – Plastic Tech)

ಬಂಧುಗಳೇ, ಕರ್ನಾಟಕ ದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣವನ್ನು ಸ್ಥಾಪಿಸಿ, ಭ್ರಷ್ಟಾಚಾರವನ್ನು ತೊಲಗಿಸಿ, ಜನಪರ ಆಡಳಿತ ನೀಡುವ ಉದ್ದೇಶದಿಂದ ನಾನು ಕರ್ನಾಟಕದ ವಿಧಾನ ಪರಿಷತ್ ನ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.

7-8 ವರ್ಷಗಳು ಸರ್ಕಾರಿ ಕೆಲಸಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು, ಐ.ಎ.ಎಸ್ ಮತ್ತು ಕೆ.ಎ.ಎಸ್. ಪರೀಕ್ಷೆಗಳನ್ನು ಬರೆದು ಇಂಟರ್ವ್ಯೂ ಘಟ್ಟದ ವರೆಗೂ ತಲುಪಿ ಲಂಚ ನೀಡಲು ಮನಸ್ಸಿಲ್ಲದೇ ಹೊರಗುಳಿಯಬೇಕಾದ ಪರಿಸ್ಥಿತಿ ಬಂದಿತ್ತು. ಆದರೂ ಛಲ ಬಿಡದೇ ನನ್ನದೇ ಸ್ವಂತ ಐ.ಎ.ಎಸ್ ಮತ್ತು ಕೆ.ಎ.ಎಸ್. ಕೋಚಿಂಗ್ ಶಿಬಿರಗಳನ್ನು ಯಶ್ಸಸ್ವಿಯಾಗಿ ನಡೆಸುತ್ತಿದ್ದೇನೆ. ಜೀವನದ ಯಾವುದೇ ಘಟ್ಟದಲ್ಲಿ ಅವಕಾಶಗಳಿದ್ದರೂ ಭ್ರಷ್ಟಾಚಾರಕ್ಕೆ ಬಲಿಯಾಗದೇ ಆದರ್ಶಗಳನ್ನು ಕಾಪಾಡಿಕೊಂಡು ಬಂದಿದ್ದೇನೆ.

ದೇಶದಲ್ಲಿ ಪದವೀಧರರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ಅವರ ಪದವಿಗೆ ತಕ್ಕನಾದ ಉದ್ಯೋಗ ಸಿಗದೇ ಇರುವಂತಹುದು ಮತ್ತು ನಿರುದ್ಯೋಗಿಗಳಿಗೆ ಮಾಸಾಶನ ನೀಡುವ ವಿಚಾರಗಳನ್ನು ಇಟ್ಟುಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದೇನೆ.

ಮತದಾರರು ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಗುಲಾಮರಾಗದೇ ಅವರ ಮತ್ತು ಅವುಗಳ ಮಾಲೀಕರಾಗಬೇಕೆಂದು ಕೆ.ಆರ್.ಎಸ್. ಪಕ್ಷದ ಮುಖ್ಯ ಉದ್ದೇಶ. ಆದ್ದರಿಂದ ನನ್ನ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಕೈಲಾದಷ್ಟು ಧನಸಹಾಯ ಮಾಡಿ ನೀವೂ ಈ ಪ್ರಕ್ರಿಯೆಯಲ್ಲಿ ಭಾಗಿದಾರರಾಗಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ.