ಪಶ್ಚಿಮ ಪದವೀಧರರ ಕ್ಷೇತ್ರ – West Graduates Constituency

ಶಿವರಾಜ ಕೆ. ಕಾಂಬಳೆ (ಬಿಎ., ಬಿಎಡ್. ಟಿಇಟಿ, ಜಿಡಿಸಿ)
Shivaraja K. Kambale (BA, BEd, TET, GDC)

ಬಂಧುಗಳೇ, ಕರ್ನಾಟಕ ದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣವನ್ನು ಸ್ಥಾಪಿಸಿ, ಭ್ರಷ್ಟಾಚಾರವನ್ನು ತೊಲಗಿಸಿ, ಜನಪರ ಆಡಳಿತ ನೀಡುವ ಉದ್ದೇಶದಿಂದ ನಾನು ಕರ್ನಾಟಕದ ವಿಧಾನ ಪರಿಷತ್ ನ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.

ನಾನು ಒಬ್ಬ ಸಾಮಾನ್ಯ ಬಡ ಕುಟುಂಬದಿಂದ ಬಂದಿರುವ ಶ್ರಮ ಜೀವಿ. ರಾತ್ರಿ ಹೊತ್ತು ವಾಚ್ ಮ್ಯಾನ್ ಕೆಲಸ ಮಾಡಿ, ಹಗಲು ಹೊತ್ತು ಕೊರಿಯರ್ ಬಾಯ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ನಾನು ಸಾಮಾಜಿಕ ಕಳಕಳಿಯುಳ್ಳ ವ್ಯಕ್ಟಿಯಾಗಿದ್ದು ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಅನ್ಯಾಯದ ಬಗ್ಗೆ ಧ್ವನಿ ಎತ್ತಿ ನ್ಯಾಯ ಒದಗಿಸುವ ಸಲುವಾಗಿ ಹೋರಾಟ ಮಾಡಿದ್ದೇನೆ. ನನ್ನ ಕೆಲವು ಹೋರಾಟಗಳು ಈ ಕೆಳಗಿನಂತಿವೆ. 1) ವಿದ್ಯಾರ್ಥಿಗಳ ಶಾಲಾ ಶುಲ್ಕಗಳನ್ನು ಹೆಚ್ಚಿಸಿದಾಗ ಅದರ ವಿರುದ್ಧ 2) ವಿದ್ಯಾರ್ಥಿಗಳ ಬಸ್ ಶುಲ್ಕ ಹೆಚ್ಚಿಸಿದಾಗ ಅದರ ವಿರುದ್ಧ 3) ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಧ್ವನಿ ಎತ್ತುತ್ತಾ ಬಂದಿರುತ್ತೇನೆ. ನಾನು ಚುನಾವಣೆಯಲ್ಲಿ ಗೆದ್ದು ವಿದ್ಯಾರ್ಥಿಗಳ ಮತ್ತು ಪದವೀಧರರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿರುತ್ತೇನೆ. ಆದ್ದರಿಂದ ಕೆ.ಆರ್.ಎಸ್. ಪಕ್ಷದಂತಹ ಪ್ರಾಮಾಣಿಕ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ.

ಮತದಾರರು ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಗುಲಾಮರಾಗದೇ ಅವರ ಮತ್ತು ಅವುಗಳ ಮಾಲೀಕರಾಗಬೇಕೆಂದು ಕೆ.ಆರ್.ಎಸ್. ಪಕ್ಷದ ಮುಖ್ಯ ಉದ್ದೇಶ. ಆದ್ದರಿಂದ ನನ್ನ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಕೈಲಾದಷ್ಟು ಧನಸಹಾಯ ಮಾಡಿ ನೀವೂ ಈ ಪ್ರಕ್ರಿಯೆಯಲ್ಲಿ ಭಾಗಿದಾರರಾಗಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ.