“ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ

ಬಂಧುಗಳೇ,

ಕರ್ನಾಟಕದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಾವೊಂದಷ್ಟು ಸಮಾನಮನಸ್ಕ ರಾಜಕಾರಣಿಗಳು ಹಾಗೂ ರಾಜಕೀಯ ಕಾರ್ಯಕರ್ತರು ಕೂಡಿಕೊಂಡು “ಕರ್ನಾಟಕ ರಾಷ್ಟ್ರ ಸಮಿತಿ” ಎಂಬ ನೂKRS Party Inaugural Ceremony Invitationತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದೇವೆ. ಈ ಪ್ರಾದೇಶಿಕ ಪಕ್ಷದ ಉದ್ಘಾಟನಾ ಸಮಾವೇಶವು ಆಗಸ್ಟ್ 10, 2019 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ ಸಮಾರಂಭಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ.

ನಮ್ಮ ಪಕ್ಷದ ಧ್ಯೆಯೋದ್ದೇಶಗಳು ಹಾಗೂ ನಾವು ಕೈಗೆತ್ತಿಕೊಳ್ಳಲಿರುವ ಹಲವು ರಾಜಕೀಯ ವಿಚಾರ ಮತ್ತು ಹೋರಾಟಗಳ ಕುರಿತು ಇಲ್ಲಿ ಲಗತ್ತಿಸಿರುವ ಕರಪತ್ರದಲ್ಲಿ ಮಾಹಿತಿ ಇದೆ.

ನಮ್ಮ ರಾಜ್ಯದ ಇಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ನಿಮಗೆ ಗೊತ್ತಿಲ್ಲದಿರುವುದು ಏನೂ ಇಲ್ಲ. ಹಾಗಾಗಿ ಇಂದು ಇಂತಹ ಪಕ್ಷವೊಂದರ ಅನಿವಾರ್ಯತೆಯನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ.

ದಯವಿಟ್ಟು ಬೆಂಬಲಿಸಿ ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎನ್ನುವುದು ನನ್ನ ಸವಿನಯ ಮನವಿ.

ಭಾಗವಹಿಸುವವರು ದಯವಿಟ್ಟು ಇಲ್ಲಿ ನೋಂದಾಯಿಸಿಕೊಳ್ಳಿ: http://krsparty.org/registration

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ಅಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ.

Leave a Reply

Your email address will not be published. Required fields are marked *